ಕಲ್ಯಾಣಿ

ಇತರ ವೈಶಿಷ್ಟ್ಯಗಳು

ಸಾಂಪ್ರದಾಯಿಕವಾಗಿ, ದಕ್ಷಿಣ ಭಾರತದ ದೇವಾಲಯಗಳು ತಮ್ಮ ಈಶಾನ್ಯಕ್ಕೆ ಕಲ್ಯಾಣಿ - ಅಂದರೆ ಮೆಟ್ಟಿಲುಗಳ ತೊಟ್ಟಿಯನ್ನು ಹೊಂದಿವೆ ಹಾಗೂ, ವಾಸ್ತವವಾಗಿ ಸೋಮೇಶ್ವರ ದೇವಾಲಯದಲ್ಲೂ ಈ ಸಂರಚನೆಯನ್ನು ಕಾಣಬಹುದು. ಕಲ್ಯಾಣಿಯು ದೇವಾಲಯದ ಆಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಶೇಷವಾಗಿ ತೆಪ್ಪೋತ್ಸವದ ಸಮಯದಲ್ಲಿ, ಪತ್ನೀಸಮೇತನಾದ ಭಗವಂತನ ವಿಗ್ರಹವನ್ನು ಕಲ್ಯಾಣಿಯ ತೇಲುವ ತೆಪ್ಪದ ಮೇಲೆ ತೆಗೆದುಕೊಂಡು ಹೋಗಲಾಗುತ್ತದೆ. ದೇವಾಲಯದ ಕಲ್ಯಾಣಿಯ ಅಳತೆ ಸರಿಸುಮಾರು 27 x 25 ಮೀಟರ್‌ಗಳಷ್ಟು ಇದ್ದು, ಇದರ ಹಿಂದೆ ಕುತೂಹಲಕಾರಿ ಕಥೆಯೂ ಇದೆ. 1500ರ ದಶಕದಲ್ಲಿ ಒಂದಾದ ಮೇಲೆ ಒಂದರಂತೆ ದೇವಾಲಯವು ನವೀಕರಣಗಳ ಸರಣಿಗೆ ಒಳಪಟ್ಟಾಗ ಇದನ್ನು ಬಹುಶಃ ನಿರ್ಮಿಸಲಾಗಿದೆ. 1880ರ ನಕ್ಷೆಗಳು ಕಲ್ಯಾಣಿಯನ್ನು ಸ್ಪಷ್ಟವಾಗಿ ತೋರಿಸುತ್ತವೆ, ಆದರೆ ಇದು 1900ರ ದಶಕದ ಆರಂಭದ ನಕ್ಷೆಗಳಲ್ಲಿ ಕಾಣಬರುವುದಿಲ್ಲ. ಬಹುಶಃ, ನಗರದ ಅನೈರ್ಮಲ್ಯದ ಬಗ್ಗೆ, ಅದರಲ್ಲೂ ವಿಶೇಷವಾಗಿ, ಕಾಲರಾ ಮತ್ತು ಪ್ಲೇಗ್ ಸಾಂಕ್ರಾಮಿಕ ರೋಗಗಳ ನಂತರ, ಹೆಚ್ಚು ಜಾಗರೂಕರಾಗಿದ್ದ ಬ್ರಿಟಿಷ್ ಆಡಳಿತವು ಈ ಸಮಯದಲ್ಲಿ ಕಲ್ಯಾಣಿಯನ್ನು ಮುಚ್ಚಿರಬಹುದು. 2010ರಲ್ಲಿ ರಾಜ್ಯ ಸರಕಾರದ ಮುಜರಾಯಿ ಇಲಾಖೆಯು ಕಲ್ಯಾಣಿಯನ್ನು ಪುನಃ ಉತ್ಖನನ ಮಾಡಿತು. ಕಲ್ಯಾಣಿಗೆ ಸಾರ್ವಜನಿಕರ ಪ್ರವೇಶವಿಲ್ಲ, ಆದರೆ ಪಕ್ಕದ ಬೀದಿಗಳಿಂದ ಅದು ಕಾಣುತ್ತದೆ.

ಈಗ ಹಂಚಿಕೊಳ್ಳಿ