ಪೋಸ್ಟ್(ಕಂಬ) ಹಾಗೂ ದ್ವಾರದ ಮೇಲೆ ಹಾಕುವ ಹಾಸುಗಲ್ಲಿನ ನಿರ್ಮಾಣವು ವಿಶ್ವದ ಅತ್ಯಂತ ಪುರಾತನ ನಿರ್ಮಾಣ ಪದ್ಧತಿಗಳಲ್ಲಿ ಒಂದಾಗಿದೆ. ನೆಟ್ಟಗೆ ನಿಂತಿರುವ ಎರಡು ವಸ್ತುಗಳಿಗೆ ಆಸರೆ ನೀಡುವ ಸಮತಟ್ಟಾದ ಲಂಬವಾದ ವಸ್ತುವನ್ನು ಇದು ಒಳಗೊಂಡಿದೆ. ಈ ವ್ಯವಸ್ಥೆಯು ಅಣತಿ ದೂರದಲ್ಲೇ ಇರುವ ಎರಡು ಕಂಬಗಳಿಂದ ಹಿಡಿದು ನಿಲ್ಲಿಸಲ್ಪಟ್ಟ ಕಲ್ಲಿನ ತೊಲೆಗಳಿರುವ ಮಹಾ ಮಂಟಪದಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ, ತೊಲೆಗಳು ತಮ್ಮ ಭಾರವನ್ನು ಹೊರುವುದರ ಜೊತೆಗೆ ಛಾವಣಿಯ ಭಾರವನ್ನೂ ಹೊರಬೇಕಾದ್ದರಿಂದ, ಅವು ಒಂದೇ ಕಲ್ಲಿನ ತುಂಡುಗಳ ರೂಪದಲ್ಲಿದೆ. ಕಂಭಗಳ ಮೇಲಿರುವ ಕಂಸಗಳು ತೊಲೆಗಳಿಗೆ ಉತ್ತಮ ಊರೆಯನ್ನು/ಆತುವನ್ನು ಒದಗಿಸಿ, ಅವುಗಳ ವ್ಯಾಪನವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಈ ತೊಲೆಗಳ ಮೇಲೆ ನಿಂತ ಕಲ್ಲಿನ ಚಪ್ಪಡಿಗಳೇ ಮಂಟಪದ ಛಾವಣಿಯಾಗಿದೆ.