ಕಂಬಗಳು

ದೇವಾಲಯದ ವಾಸ್ತುಶಿಲ್ಪ ಮತ್ತು ಯೋಜನೆ

ಮಹಾ ಮಂಟಪವು ಸೂಕ್ಷ್ಮವಾದ ಕೆತ್ತನೆಗಳು/ಸೊಗಸಾದ ಕೆತ್ತನೆಗಳು ಮತ್ತು ಅಲಂಕಾರಗಳಿಂದ ತುಂಬಿದ್ದು, ಇದು ವಿಶೇಷವಾಗಿ 48 ಕಂಬಗಳ ಮೇಲೆ ಗೋಚರಿಸುತ್ತದೆ. ಈ ಸ್ತಂಭಗಳನ್ನು ಅವುಗಳ ಸಂರಚನೆಗೆ ಅನುಗುಣವಾಗಿ ವಿವಿಧ ಸಂಕೇತಗಳಾಗಿ ವರ್ಗೀಕರಿಸಬಹುದು. ಪ್ರಮಾಣಿತ ಸ್ತಂಭವು ಬಹುಭುಜಾಕೃತಿಯ ದಿಂಡು ಆಗಿದ್ದು, ಮೂರು ಚದರ ವಿಭಾಗಳಾಗಿ ವಿಭಜಿಸಲ್ಪಟ್ಟಿದ್ದು, ಪ್ರತಿಯೊಂದೂ ದೇವರುಗಳು, ಪ್ರಾಣಿಗಳು, ಆಕಾಶಗಳು ಮತ್ತು ಸಾಮಾನ್ಯ ಜನರ ಶಿಲ್ಪಗಳಿಂದಲೂ ಸಮೃದ್ಧವಾಗಿ ಕೆತ್ತಲಾಗಿದೆ. ಕೇಂದ್ರ ಅಂಕಣಗಳ ಹಾಗೂ ಪರಿಧಿಯ ಉದ್ದಕ್ಕೂ, ಸ್ಥಂಭಗಳಲ್ಲಿ ತೆಳ್ಳಗಿನ ಕೊಲೊನೆಟ್ /ಕಂಭವನ್ನು ಪರಿಚಯಿಸಲಾಗಿದೆ. ಈ ಕೊಲೊನೆಟ್‌ಗಳು ಸ್ತಂಭದ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಆಳವಾದ ಮುಂಚಾಚಿಗೆ ಅನುವು ಮಾಡಿಕೊಡುವ ಎರಡೂ ಉದ್ದೇಶವನ್ನು ಪೂರೈಸುತ್ತವೆ. ವಿಶೇಷವಾಗಿ ಕೇಂದ್ರ ಅಂಕಣದಲ್ಲಿ, ಕಾಣುವ ಒಟ್ಟಾರೆ ನೋಟವನ್ನು ಕೊಲೊನೆಟ್‌ಗಳು ತೆಳ್ಳಗೆ ಇಡುತ್ತವೆ, ಹಾಗಾಗಿ ಲಘುತ್ವದ ಭಾವಕ್ಕೆ ತನ್ನ ಕೊಡುಗೆಯನ್ನು ನೀಡುತ್ತವೆ. ತನ್ನ ಪೂರ್ವ ದ್ವಾರದ ಕಡೆಗೆ ಮಂಟಪ ಚಾಚಿಕೊಂಡಿರುವ ಕಡೆಯಲ್ಲಿ ಕೋನಾಕಾರದ ಕಲೋನೆಟ್ ಹೊಂದಿರುವ ಕಂಬವು ಇದೆ. ಮೂರು ಪ್ರವೇಶ ಮೆಟ್ಟಿಲುಗಳ ಇಕ್ಕೆಲೆಗಳಲ್ಲಿ ಯಾಳಿಗಳನ್ನು ಹೊಂದಿರುವ ಕಂಬಗಳು ಇವೆ.

ಈಗ ಹಂಚಿಕೊಳ್ಳಿ