ಗೋಡೆಯ ನಿರ್ಮಾಣ

ಸಾಮಗ್ರಿಗಳು ಹಾಗೂ ಕಾರ್ಯವಿಧಾನ

ದೇವಾಲಯದ ಗೋಡೆಗಳನ್ನು ಸಂಸ್ಕರಣೆಯಾದ ಕಲ್ಲು ಕೆಲಸವನ್ನುಬಳಸಿ, ಗಾರೆಯೊಂದಿಗೆ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ, ಇದೇ ಅವಧಿಯಲ್ಲಿ ನಿರ್ಮಿಸಲಾದ ದೇವಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತೆ, ಇಲ್ಲೂ ಎರಡು ಗೋಡೆಯ ವ್ಯವಸ್ಥೆಯನ್ನು ಅನುಸರಿಸಲಾಗಿದೆ. ಗೋಡೆಯು ಕಲ್ಲಿನ ಎರಡು ಪದರಗಳನ್ನು ಒಳಗೊಂಡಿದ್ದು, ಅವುಗಳ ನಡುವೆ ಒಂದು ಕುಳಿಯು ಕಲ್ಲುಮಣ್ಣುಗಳಿಂದ ತುಂಬಿರುತ್ತದೆ - ಇದರಿಂದಾಗಿ ಗೋಡೆಯು ಸ್ಯಾಂಡ್ವಿಚ್ ಅನ್ನು ಹೋಲುತ್ತದೆ. ಗೋಡೆಯ ದಪ್ಪವು ಕೆಲವು ಸ್ಥಳಗಳಲ್ಲಿ 60 ಸೆಂ.ಮೀ ನಿಂದ ಒಂದು ಮೀಟರ್ ದಪ್ಪದವರೆಗೆ ಇರುತ್ತದೆ. ಗೋಡೆಯ ಮೇಲ್ಮೈಗಳ ಉದ್ದಕ್ಕೂ, ಕಚ್ಚಾ ಕಲ್ಲಿನ ತುಂಡುಗಳು ನಿಯಮಿತ ಅಂತರದಲ್ಲಿ ಚಾಚಿಕೊಂಡಿರುವದನ್ನು ನೋಡಬಹುದು. ಈ ದೊಡ್ಡ ಕಲ್ಲುಗಳನ್ನು ಥ್ರೂ-ಸ್ಟೋನ್ಸ್ ಅಥವಾ ಬಾಂಡ್ ಸ್ಟೋನ್ಸ್ ಎಂದು ಕರೆಯಲಾಗುತ್ತದೆ. ಅವು ಗೋಡೆಯ ಸಂಪೂರ್ಣ ಅಗಲವನ್ನು ವ್ಯಾಪಿಸಿ, ಗೋಡೆಗಳ ಎರಡು ಪದರಗಳನ್ನು ರಚನಾತ್ಮಕವಾಗಿ ಬಿಗಿದಿಡಲು ನೆರವಾಗುತ್ತದೆ. ನೀವು ಪ್ರದಕ್ಷಿಣಾ ಪಥದಲ್ಲಿ ನಡೆಯುವಾಗ, ಎರಡು ಅಡ್ಡತೊಲೆಗಳ ಛೇದನದಲ್ಲಿ ಬಂಧದ ಕಲ್ಲುಗಳನ್ನು ಸೂಕ್ಷ್ಮವಾಗಿ ಇರಿಸಿರುವುದನ್ನೂ, ಅದರಿಂದ ಕಲ್ಲಿನ ಗೋಡೆಗಳ ಮೇಲೆ ಭಾರವನ್ನು ಪರಿಣಾಮಕಾರಿಯಾಗಿ ವರ್ಗಾಯಿಸಲು ಅನುವು ಮಾಡಿಕೊಟ್ಟಿರುವುದನ್ನೂ ಗಮನಿಸಿ. ಮುಖ್ಯ ದೇಗುಲದ ಉತ್ತರಕ್ಕೆ, ಹಳೆಯ ದೇವಾಲಯದ ಆವರಣದ ಗೋಡೆಯ ಸಣ್ಣ ಭಾಗದ ಮೇಲೆ ಈ ಥ್ರೂ-ಸ್ಟೋನ್ಸ್ ಗೋಚರಿಸುತ್ತವೆ.

ಈಗ ಹಂಚಿಕೊಳ್ಳಿ