ಅಧಿಷ್ಠಾನ

ದೇವಾಲಯದ ವಾಸ್ತುಶಿಲ್ಪ ಮತ್ತು ಯೋಜನೆ

ಪಡ (ಗೋಡೆಗಳು) ಹಾಗೂ ಮೇರುರಚನೆಯ ಇತರ ಅಂಶಗಳು ದೇಗುಲದ ಅಧಿಷ್ಠಾನ, ಅಂದರೆ ಅದರ ತಳ ಅಥವಾ ಮೇಲುಪಾಯ/ಪಿಂಜಿಯ ಮೇಲೆ ನಿಂತಿವೆ ಅಡಿಪಾಯವು ಸಾಮಾನ್ಯವಾಗಿ ಹಲವಾರು ಕಾರಣೆ/ಬಾಹ್ಯರೇಖಾಲಂಕಾರಗಳನ್ನು ಒಳಗೊಂಡಿರುತ್ತದೆ (ಕೆಳದಿಂದ ಮೇಲಕ್ಕೆ): ಉಪಾನ ಅಥವಾ ಸುಬತಳ, ಪದ್ಮ (ಕಮಲ ವಿನ್ಯಾಸದ ಪದರ), ಜಗತಿ (ನೇರ ಮತ್ತು ಸರಳ ಅಲಂಕೃತ), ಕುಮುದ (ಸುತ್ತಿನ ಹಾಗೂ ಅಡ್ಡಪಟ್ಟಿ), ಕಂಠ ಮತ್ತು ಕಪೋಲಪಾಲಿಕಾ. (ಕಮಲ ದಳಗಳ ಎರಡು ಪದರ) ಈ ಪದರಗಳು ಸೋಮೇಶ್ವರ ದೇವಾಲಯದ ಮಹಾಮಂಟಪದ ಅಧಿಷ್ಠಾನದಲ್ಲಿ ಕಂಡುಬರುತ್ತವೆ. ಅಧಿಷ್ಠಾನದ ಸಾಲಿನಲ್ಲಿ ಇರುವ ಗರ್ಭಗೃಹವು ಹೆಚ್ಚಿನ ಪದರಗಳೊಂದಿಗೆ ವಿನ್ಯಾಸದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ಈಗ ಹಂಚಿಕೊಳ್ಳಿ