ಫೋಟೊಗ್ರಾಮೆಟ್ರಿ, ಒಂದು ವಸ್ತುವಿನ ಅಥವಾ ಪರಿಸರದ ಹೆಚ್ಚಿನ ಸಂಖ್ಯೆಯ ಸ್ಥಿರ ಛಾಯಾಚಿತ್ರಗಳನ್ನು ಸಂಯೋಜಿಸಿ ನಿಖರವಾದ ಮತ್ತು ನ್ಯಾವಿಗೇಟ್ ಮಾಡಬಹುದಾದ/ಸಂಚಾರ-ಯೋಗ್ಯವಾದ 3D ಮಾದರಿಯನ್ನು ರಚಿಸುವ ಪ್ರಕ್ರಿಯೆಯಾಗಿದೆ. ಈ ತಂತ್ರವು, ಹೆಚ್ಚಿನ ಮಟ್ಟದ ಶಿಲ್ಪಕಲಾ ವಿವರಗಳನ್ನು, ಎತ್ತರದ ಗೋಪುರಗಳು ಹಾಗೂ ವಿಮಾನಗಳಂತಹ ದುರ್ಗಮ ಪ್ರದೇಶಗಳನ್ನು ಹೊಂದಿರುವ ಸೋಮೇಶ್ವರ ದೇಗುಲದಂತಹ ಪಾರಂಪರಿಕ ತಾಣಗಳನ್ನು ದಾಖಲಿಸಲು ಉಪಯುಕ್ತವಾಗಿದೆ. ನೆಲದ ಯೋಜನೆಗಳ ಮೂಲ ಅಳತೆಗಳು ಮತ್ತು ದೂರವನ್ನು ಪಡೆಯಲು, ಹಸ್ತಚಾಲಿತ ವಿಧಾನಗಳನ್ನು ಬಳಸಿ, ತಲುಪಲು ಕಷ್ಟಸಾಧ್ಯವಾದ ಶಿಲ್ಪ ಫಲಕಗಳು ಮತ್ತು ಇತರ ಅಂಶಗಳ ಅಳತೆ-ತಿದ್ದುಪಡಿಯಾದ ಆರ್ಥೋಗೋನಲ್ ಚಿತ್ರಗಳನ್ನು2 ಸಾಧಿಸಲು ಫೋಟೋಗ್ರಾಮೆಟ್ರಿಯನ್ನು ಇಲ್ಲಿ ಬಳಸಲಾಗಿದೆ. ರೇಖಾಚಿತ್ರಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಎರಡೂ ವಿಧಾನಗಳನ್ನು ನಂತರ ಪರಸ್ಪರ ವಿರುದ್ಧವಾಗಿ ಉಲ್ಲೇಖಿಸಲಾಗಿದೆ.