ಕಾಮಾಕ್ಷಿ ಅಮ್ಮನ ದೇಗುಲ

ಇತರ ವೈಶಿಷ್ಟ್ಯಗಳು

ಕಾಮಾಕ್ಷಿ ಅಮ್ಮನ ದೇವಾಲಯವು ಮುಖ್ಯ ದೇವಾಲಯದ ಉತ್ತರಕ್ಕೆ ಇದೆ. ಇದು ಪ್ರಾಯಶಃ 17ನೆಯ ಅಥವಾ 18ನೆಯ ಶತಮಾನಕ್ಕೆ ಸೇರಿದ್ದು, ಈ ಪ್ರದೇಶವು ಮೈಸೂರಿನ ಒಡೆಯರ್‌ಗಳ ಅಧೀನದಲ್ಲಿದ್ದರೂ, ದೇಗುಲವನ್ನು ಅವರ ಆದೇಶದ ಮೇರೆಗೆ ಕಟ್ಟದೆ ಇದ್ದಿರಬಹುದು. ಇಕ್ಕೆಲೆಗಳಲ್ಲೂ ಯಾಳಿಗಳು ಮತ್ತು ಯಾಳಿಗಳ ಕೆತ್ತನೆಯನ್ನು ಹೊಂದಿದ ಹೂಜಿಗಂಬ ಸಾಲುಗಳಿರುವ ಒಂದೇ ಮೆಟ್ಟಿಲುಗಳ ಸಾಲಿನ ಮೂಲಕ ಏಕ ಅಂಕಣ ಮಂಟಪವನ್ನು ಹೊಂದಿದ ಈ ದೇವಾಲಯವನ್ನು ಪ್ರವೇಶಿಸಬಹುದು. ಇದರ ನಂತರ ಒಂದು ಅಂತರಾಳ ಅಥವಾ ಮೊಗಸಾಲೆ/ಮುಖಮಂಟಪವು ಇದ್ದು, ಅದರಿಂದಾಚೆಗೆ ದೇವರಿರುವ ಒಳಗಿನ ಗರ್ಭಗುಡಿ ಇದೆ. ಕಾಮಾಕ್ಷಿ ಅಮ್ಮನ್ ದೇವಾಲಯದ ಅತ್ಯಂತ ಆಕರ್ಷಕ ಅಂಶವೆಂದರೆ ಗಿರಿಜಾ ಕಲ್ಯಾಣ - ಇದನ್ನು ದೇವಾಲಯದ ಹೊರ ಗೋಡೆಗಳ ಮೇಲೆ ಸ್ಪಷ್ಟವಾಗಿ ಎದ್ದುಕಾಣುವಂತೆ ಕೆತ್ತಲಾಗಿದೆ. ಗರ್ಭಗುಡಿಯ ಮೇಲೆ, ಇಟ್ಟಿಗೆ ಕಲ್ಲಿನಿಂದ ನಿರ್ಮಿಸಿದ ಹಾಗೂ ಗಾರೆ ಆಕೃತಿಗಳಿಂದ ಅಲಂಕರಿಸಲ್ಪಟ್ಟ ಗೋಪುರ ಇದೆ.

ಈಗ ಹಂಚಿಕೊಳ್ಳಿ