ಸಾಮಗ್ರಿಗಳು

ಸಾಮಗ್ರಿಗಳು ಹಾಗೂ ಕಾರ್ಯವಿಧಾನ

ಸೋಮೇಶ್ವರ ದೇವಾಲಯದ ನಿರ್ಮಾಣಕ್ಕೆ ಕಲ್ಲು, ಇಟ್ಟಿಗೆ ಮತ್ತು ಮರದಂತಹ ಅನೇಕ ಬಗೆಯ ಸಾಮಾಗ್ರಿಗಳನ್ನು ಬಳಸಲಾಗಿದೆ. ಮೂಲಭೂತವಾಗಿ, ದೇವಾಲಯವನ್ನು ಗ್ರಾನೈಟ್‌ನಿಂದ ನಿರ್ಮಿಸಲಾಗಿದ್ದು, ಇದನ್ನು ಸ್ಥಳೀಯವಾಗಿ ಚಪ್ಪಡಿ ಎಂದು ಕರೆಯಲಾಗುತ್ತದೆ. ಗ್ರಾನೈಟ್ ಸ್ಥಳೀಯವಾಗಿ ಲಭ್ಯವಿದ್ದು, ಗಟ್ಟಿಯಾದ ಮತ್ತು ಬಾಳಿಕೆ ಬರುವಂತಹದ್ದಾಗಿದ್ದು, ಇದು ಅತ್ಯಂತ ಸೂಕ್ತ ಆಯ್ಕೆಯಾಗಿದೆ. ದೇವಾಲಯದ ಹೆಚ್ಚಿನ ಭಾಗವನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದರೂ, ಗರ್ಭಗುಡಿಯ ಮೇಲಿರುವ ಟೊಳ್ಳಾದ, ಪಿರಮಿಡ್ ವಿಮಾವನ್ನು ಇಟ್ಟಿಗೆಗಳು ಮತ್ತು ಗಾರೆಗಳಿಂದ ನಿರ್ಮಿಸಲಾಗಿದೆ. ಗೋಪುರದ ಮೇಲಿನ ಅಲಂಕಾರಿಕ ವಿಗ್ರಹಗಳನ್ನು, ಸುಣ್ಣ, ಮರಳು ಮತ್ತು ನೀರಿನಿಂದ ಮಾಡಿದ ಒಂದು ರೀತಿಯ ಪ್ಲಾಸ್ಟರ್ ಆದ ಗಾರೆಯಲ್ಲಿ ಕೆತ್ತಲಾಗಿದೆ. ಗೋಪುರವು ಒಂದೇ ರೀತಿಯ ಸಾಮಗ್ರಿಗಳನ್ನು ಹೊಂದಿದ್ದು, ಕೆಳಾರ್ಧವನ್ನು ಕಲ್ಲು ಮತ್ತು ಮೇಲಿನ ಅರ್ಧ ಇಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದ್ದು, ಗಾರೆ ಆಕೃತಿಗಳಿಂದ ಅಲಂಕರಿಸಲಾಗಿದೆ. ಇಲ್ಲಿ ಬಳಸಲಾದ ಮದ್ರಾಸ್ ಟೆರೇಸ್‌ಗಳ/ಜಗುಲಿಯ ದೂಲಗಳಿಗೆ ತೇಗದ ಮರವನ್ನು ಬಳಸಲಾಗಿದೆ.

ಈಗ ಹಂಚಿಕೊಳ್ಳಿ